ಕಣ್ಣಿನ ಚಿಕಿತ್ಸೆಗಳು
ನಿಯಮಿತ ಕಣ್ಣಿನ ಪರೀಕ್ಷೆಯಿಂದ ಶಸ್ತ್ರಚಿಕಿತ್ಸೆಯವರೆಗೆ, ನಮ್ಮ ಮೂರೂ ಬೆಂಗಳೂರು ಕ್ಲಿನಿಕ್ಗಳಲ್ಲಿ ಲಭ್ಯ.
- ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ
- ಸಾಮಾನ್ಯ ಮತ್ತು ಪ್ರೀಮಿಯಂ ಲೆನ್ಸ್ ಆಯ್ಕೆಗಳೊಂದಿಗೆ ಫೇಕೋ ಶಸ್ತ್ರಚಿಕಿತ್ಸೆ, ವಯಸ್ಕರು ಮತ್ತು ಮಕ್ಕಳ ಕಣ್ಣಿನ ಪೊರೆಗೆ.
- ಸಮಗ್ರ ಕಣ್ಣಿನ ತಪಾಸಣೆ
- ದೃಷ್ಟಿ, ಕಣ್ಣಿನ ಒತ್ತಡ ಮತ್ತು ಕಣ್ಣಿನ ಮುಂಭಾಗ ಹಾಗೂ ಹಿಂಭಾಗದ ಸಂಪೂರ್ಣ ಆರೋಗ್ಯ ತಪಾಸಣೆ.
- ಮಕ್ಕಳ ಕಣ್ಣಿನ ಆರೈಕೆ ಮತ್ತು ಮೆಳ್ಳೆಗಣ್ಣು
- ಮಕ್ಕಳಿಗೆ ಸ್ನೇಹಪರ ಕಣ್ಣಿನ ಪರೀಕ್ಷೆ, ಸೋಮಾರಿ ಕಣ್ಣಿನ ಚಿಕಿತ್ಸೆ ಮತ್ತು ಮೆಳ್ಳೆಗಣ್ಣು ಸರಿಪಡಿಸುವಿಕೆ.
- ಗ್ಲುಕೋಮಾ ಚಿಕಿತ್ಸೆ
- ಒತ್ತಡ ಮತ್ತು ನರದ ತಪಾಸಣೆಯಿಂದ ಬೇಗ ಪತ್ತೆ, ನಂತರ ಹನಿಮದ್ದು, ಲೇಸರ್ ಅಥವಾ ಶಸ್ತ್ರಚಿಕಿತ್ಸೆ.
- ರೆಟಿನಾ ಮತ್ತು ಮಧುಮೇಹ ಕಣ್ಣಿನ ಆರೈಕೆ
- ಡಯಾಬಿಟಿಕ್ ರೆಟಿನೋಪತಿ ತಪಾಸಣೆ ಮತ್ತು ಚಿಕಿತ್ಸೆ, ವಿಟ್ರಿಯೋರೆಟಿನಲ್ ಶಸ್ತ್ರಚಿಕಿತ್ಸೆ ಸೇರಿದಂತೆ.
- ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್ ಮತ್ತು ಆಪ್ಟಿಕಲ್
- ನಿಖರ ಪ್ರಿಸ್ಕ್ರಿಪ್ಷನ್, ಕಾಂಟ್ಯಾಕ್ಟ್ ಲೆನ್ಸ್ ಹೊಂದಿಸುವಿಕೆ, ಮತ್ತು ನಮ್ಮದೇ ಆಪ್ಟಿಕಲ್ ಹಾಗೂ ಫಾರ್ಮಸಿ.
- ಕಣ್ಣುರೆಪ್ಪೆ, ಕಣ್ಣಿನ ಗೂಡು ಮತ್ತು ಆಕ್ಯುಲೋಪ್ಲಾಸ್ಟಿ
- ಜೋತುಬಿದ್ದ ಅಥವಾ ತಿರುಗಿದ ಕಣ್ಣುರೆಪ್ಪೆಗಳು, ಕಣ್ಣೀರು ನಾಳದ ಸಮಸ್ಯೆಗಳು ಮತ್ತು ಕೃತಕ ಕಣ್ಣುಗಳು.
- LASIK ಮತ್ತು ರಿಫ್ರ್ಯಾಕ್ಟಿವ್ ಶಸ್ತ್ರಚಿಕಿತ್ಸೆ
- ಸಮೀಪದೃಷ್ಟಿ, ದೂರದೃಷ್ಟಿ ಮತ್ತು ಅಸ್ಟಿಗ್ಮ್ಯಾಟಿಸಂಗೆ LASIK, PRK, SMILE, SMILE Pro ಮತ್ತು ICL.
- ಕಾರ್ನಿಯಾ ಮತ್ತು ಕೆರಟೋಕೋನಸ್ ಆರೈಕೆ
- ಕೊಲಾಜೆನ್ ಕ್ರಾಸ್-ಲಿಂಕಿಂಗ್ನೊಂದಿಗೆ ಕೆರಟೋಕೋನಸ್ ಚಿಕಿತ್ಸೆ, ಮತ್ತು ಕಾರ್ನಿಯಾ ಸೋಂಕು ಹಾಗೂ ಗಾಯಗಳಿಗೆ ಆರೈಕೆ.
- ಒಣ ಕಣ್ಣಿನ ಕ್ಲಿನಿಕ್
- ಒಣ ಕಣ್ಣಿನ ಮೌಲ್ಯಮಾಪನ, IPL (E-Eye) ಚಿಕಿತ್ಸೆ ಮತ್ತು ಕಂಪ್ಯೂಟರ್ ದೃಷ್ಟಿ ಆರೈಕೆ.
ನಿಮಗೆ ಯಾವ ಚಿಕಿತ್ಸೆ ಬೇಕು ಎಂದು ಖಚಿತವಿಲ್ಲವೇ?
ಮೊದಲು ಮಾಡಿಸಿ ಒಂದು ಸಂಪೂರ್ಣ ಕಣ್ಣಿನ ತಪಾಸಣೆ. ನಮ್ಮ ನೇತ್ರ ತಜ್ಞರು ನಿಮ್ಮ ದೃಷ್ಟಿ, ಕಣ್ಣಿನ ಒತ್ತಡ ಮತ್ತು ರೆಟಿನಾ ಪರೀಕ್ಷಿಸಿ, ಕಂಡುಕೊಂಡದ್ದನ್ನು ವಿವರಿಸಿ, ಹೊಸ ಕನ್ನಡಕ, ಔಷಧಿ ಅಥವಾ ಶಸ್ತ್ರಚಿಕಿತ್ಸೆ ಯಾವುದಾದರೂ ಸರಿಯಾದ ಮುಂದಿನ ಹೆಜ್ಜೆಯನ್ನು ಸೂಚಿಸುತ್ತಾರೆ.
ನಾವು ಹೇಗೆ ಕೆಲಸ ಮಾಡುತ್ತೇವೆ
- ಪ್ರತಿ ಸಮಾಲೋಚನೆಯೂ ಅರ್ಹ ನೇತ್ರ ತಜ್ಞರೊಂದಿಗೆ
- ಹೆಚ್ಚಿನ ಪರೀಕ್ಷೆಗಳು ಕ್ಲಿನಿಕ್ನಲ್ಲಿ ಅದೇ ದಿನ
- ನೀವು ನಿರ್ಧರಿಸುವ ಮೊದಲು ಪ್ರತಿ ಆಯ್ಕೆ ಮತ್ತು ಅದರ ವೆಚ್ಚದ ವಿವರಣೆ
- ಪ್ರಮುಖ ವಿಮಾ ಕಂಪನಿಗಳು ಮತ್ತು TPA ಗಳೊಂದಿಗೆ ಕ್ಯಾಶ್ಲೆಸ್ ಚಿಕಿತ್ಸೆ
- ಅದೇ ಕ್ಲಿನಿಕ್ನಲ್ಲಿ ಫಾಲೋ-ಅಪ್ ಆರೈಕೆ
ಚಿಕಿತ್ಸೆಗಳು: ಸಾಮಾನ್ಯ ಪ್ರಶ್ನೆಗಳು
ಸಂಕಲ್ಪ ನೇತ್ರಾಲಯ ಯಾವ ಕಣ್ಣಿನ ಚಿಕಿತ್ಸೆಗಳನ್ನು ನೀಡುತ್ತದೆ?
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, LASIK, PRK, SMILE, SMILE Pro ಮತ್ತು ICL, ಗ್ಲುಕೋಮಾ ಆರೈಕೆ, ಲೇಸರ್ ಮತ್ತು ವಿಟ್ರಿಯೋರೆಟಿನಲ್ ಶಸ್ತ್ರಚಿಕಿತ್ಸೆ ಸೇರಿದಂತೆ ರೆಟಿನಾ ಆರೈಕೆ, ಕಾರ್ನಿಯಾ ಆರೈಕೆ ಮತ್ತು ಕೊಲಾಜೆನ್ ಕ್ರಾಸ್-ಲಿಂಕಿಂಗ್, IPL ಇರುವ ಒಣ ಕಣ್ಣಿನ ಕ್ಲಿನಿಕ್, ಮಕ್ಕಳ ಕಣ್ಣಿನ ಆರೈಕೆ ಮತ್ತು ಮೆಳ್ಳೆಗಣ್ಣು, ಕಣ್ಣುರೆಪ್ಪೆ, ಕಣ್ಣಿನ ಗೂಡು ಮತ್ತು ಗಾಯದ ಆರೈಕೆ, ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್, ಆಪ್ಟಿಕಲ್ ಮತ್ತು ಫಾರ್ಮಸಿ.
ಎಲ್ಲಾ ಕ್ಲಿನಿಕ್ಗಳಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಲಭ್ಯವಿದೆಯೇ?
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಬಗ್ಗೆ ನೀವು ಮೂರೂ ಕ್ಲಿನಿಕ್ಗಳಲ್ಲಿ ನಮ್ಮ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಬಹುದು: HSR ಲೇಔಟ್, ಹೊಸ ರೋಡ್ ಮತ್ತು ಬಾಣಸವಾಡಿ.
ಸಮಾಲೋಚನೆಗೆ ಎಷ್ಟು ಖರ್ಚಾಗುತ್ತದೆ?
ಸಮಾಲೋಚನೆ ₹650 ರಿಂದ ಆರಂಭ. ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆಯನ್ನು ಮಾಡುವ ಮೊದಲು ವೆಚ್ಚದೊಂದಿಗೆ ವಿವರಿಸಲಾಗುತ್ತದೆ.